‘ಸಗಣಿ’ ಜೀರುಂಡೆಗಳು ಆಕರ್ಷಕ ಜೀವಿಗಳು. ಇವು ಪ್ರಾಣಿಗಳ ಸಗಣಿಗಳನ್ನು ಆಹಾರವಾಗಿ ಸೇವಿಸುತ್ತವೆ ಮತ್ತು ಅದರಿಂದ ಅವುಗಳ ಎಲ್ಲಾ ಪೋಷಕಾಂಶಗಳನ್ನು ಪಡೆಯುತ್ತವೆ. ಈ ಸಣ್ಣ ಜೀರುಂಡೆಗಳು, ಸಗಣಿಯನ್ನು ತಿನ್ನುವ ಮೂಲಕ ಮಣ್ಣಿನ ರಚನೆ ಮತ್ತು ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತವೆ. ಹಾಗಾಗಿ, ಇವು ಕೃಷಿಯಲ್ಲಿ ಅತ್ಯಗತ್ಯ ಪಾತ್ರವನ್ನು ವಹಿಸುತ್ತವೆ. ಪ್ರಾಣಿಗಳ ಸಗಣಿಯಲ್ಲಿ ಇರುವ ಬೀಜಗಳನ್ನು ಹರಡಲು, ಬೀಜಗಳನ್ನು ಮಣ್ಣಲ್ಲಿ ಸೇರಿಸುವ ಮೂಲಕ, ಉಷ್ಣವಲಯಪ್ರದೇಶಗಳಲ್ಲಿ ಗಿಡಮರಗಳು ಬೆಳೆಯಲು ಸಹಾಯ ಮಾಡುತ್ತವೆ. ಇವು ಸರ್ವಭಕ್ಷಕಗಳಿಗಿಂತ ಸಸ್ಯಹಾರಿಗಳ ಸಗಣಿಗಳಿಗೆ ಆದ್ಯತೆ ನೀಡುತ್ತವೆ.
ಭಾರತದ ಹಕ್ಕಿಗಳ ವೈವಿಧ್ಯ ತೀವ್ರ ಗತಿಯಿಂದ ಕ್ಷೀಣಿಸುತ್ತಿದೆ. ಅವನ್ನು ಉಳಿಸಲು, ತುರ್ತು ಸಂರಕ್ಷಣಾ ಕ್ರಮಗಳು ಅಗತ್ಯ ಎನ್ನುತ್ತದೆ ಇತ್ತೀಚೆಗೆ ಪ್ರಕಟವಾದ ಭಾರತೀಯ ಹಕ್ಕಿಗಳ ಸ್ಥಿತಿಗತಿಯ ಕುರಿತ ಒಂದು ಸಂಶೋಧನಾ ವರದಿ.
ಬೆಂಗಳೂರು /