ಹೊಸ ವರ್ಷ ಬಂದಾಯಿತು, ಆದರೆ ನಾವಿನ್ನು ೨೦೧೮ರ ವರ್ಷಾಗಮನವನ್ನು ಕಳೆದ ವರ್ಷದಲ್ಲಿ ಪ್ರಾರಂಭಿಸಿದ ಕೆಲವು ಚಟುವಟಿಗೆಗಳನ್ನು ಮೆಲಕು ಹಾಕುತ್ತಿದ್ದೇವೆ. ಅವುಗಳಲ್ಲಿ ಪ್ರಮುಖವಾದುದ್ದು ಪ್ರಾದೇಶಿಕ ಭಾಷೆಗಳಲ್ಲಿ ವೈಜ್ಞಾನಿಕ ಲೇಖನಗಳನ್ನು ಹೊರತರುವುದು. ಪ್ರಾರಂಭಿಕವಾಗಿ ನಾವು ಮೊದಲು ಕನ್ನಡದಲ್ಲಿ ಲೇಖನಗಳನ್ನು ಈಗ ಕಳೆದು ಮೂರು-ನಾಲ್ಕು ವರ್ಷಗಳಿಂದ ಬರೆಯುತ್ತಿದ್ದೇವೆ. ಇದಕ್ಕೆ ನಮಗೆ 'ಪ್ರಜಾವಾಣಿ'ಯಿಂದಲೂ ಬಹಳಷ್ಟು ಪ್ರೋತ್ಸಾಹ ದೊರೆಯಿತು. ಪ್ರತಿ ಸೋಮವಾರ, 'ವಿಜ್ಞಾನ ಲೋಕದಿಂದ' ಎಂಬ ಅಂಕಣದಲ್ಲಿ ನಮ್ಮ ಲೇಖನಗಳು ಮುದ್ರಣವಾಗುತ್ತಿತ್ತು. ಕಳೆದ ವರ್ಷ ನಾವು ಹಿಂದಿ, ಮರಾಠಿ ಮತ್ತು ಅಸ್ಸಾಮೀಸ್ ನಲ್ಲೂ ಲೇಖನಗಳನ್ನು ಪ್ರಕಟಿಸಲು ಪ್ರಾರಂಭಿಸಿದೆವು. ಈ ವರ್ಷ ಇನ್ನಷ್ಟು ಪ್ರಾದೇಶಿಕ ಭಾಷೆಗಳಲ್ಲಿ ಬಹಳಷ್ಟು ಲೇಖನಗಳು, ಪಾಡ್ಕ್ಯಾಸ್ಟ್ಗಳು, ಮತ್ತು ಇತರೆ ರೀತಿಯಲ್ಲಿ ಪ್ರಕಟಿಸಬೇಕೆಂದಿದ್ದೇವೆ. ಇಲ್ಲಿ ಕಳೆದ ವರ್ಷ ಪ್ರಾದೇಶಿಕ ಭಾಷೆಯಲ್ಲಿ ಪ್ರಕಟಿಸಿದ ಕೆಲವು ಆಯ್ದ ಲೇಖನಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇವೆ.
Featured
Bengaluru
ಬೆಂಗಳೂರು
'ಸೈನ್ಸ್' ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ, ಜೀವವೈವಿಧ್ಯತೆಯ ಒಡಂಬಡಿಕೆಯೇ ಜೀವವೈವಿಧ್ಯತೆಯ ಸಂಶೋಧನೆಗಳ ಮೇಲೆ ಮಿತಿ ಹೇರುವುದನ್ನು ಪ್ರಶ್ನಿಸಿ, ಬೇಲಿಯೇ ಎದ್ದು ಹೊಲ ಮೇದಂತಾಯ್ತು ಎಂದು ಟೀಕಿಸಲಾಗಿದೆ.
ಬೆಂಗಳೂರು
ಈ ಲೇಖನ ಸರಣಿಯಲ್ಲಿ 'ದುರುಪಯೋಗಪಡಿಸಿಕೊಳ್ಳಲಾದ' ಪ್ರತಿಜೀವಕಗಳು 'ಸೂಪರ್ ಬಗ್'ಗಳಿಗೆ ಹೇಗೆ ಸಹಾಯ ಮಾಡುತ್ತಿವೆ ಮತ್ತು ನಾವೇಕೆ ಪ್ರತಿಜೀವಕಗಳನ್ನು ದುರುಪಯೋಗ ಪಡಿಸಿಕೊಂಡಿದ್ದೇವೆ ಎಂಬುದರ ಬಗ್ಗೆ ವಿವರಗಳನ್ನು ನೀಡುತ್ತೇವೆ.
ಬೆಂಗಳೂರು
ಈ ವರ್ಷದ ‘ವಿಶ್ವ ಪರಿಸರ ದಿನ’ದ ಅಂಗವಾಗಿ ‘‘ಪ್ಲಾಸ್ಟಿಕ್ಕಿನಿಂದ ಮಾಲಿನ್ಯ ತಡೆಗಟ್ಟೋಣ’’ ಎಂದು ವಿಶ್ವ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಘೋಷಿಸಿದೆ. ಪ್ಲಾಸ್ಟಿಕ್ ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದರೂ ಅದರ ಬಗ್ಗೆ ಸರಿಯಾದ ಅರಿವು ಅತ್ಯವಶ್ಯಕ.