ಆಗಸ್ಟ್ ೨೦೧೯ ರಲ್ಲಿ ಚೆನ್ನೈ ಕಡಲತೀರದ ಉದ್ದಕ್ಕೂ ‘ನೋಕ್ಟಿಲುಕಾ’ ಎಂಬ ಪ್ಲ್ಯಾಂಕ್ಟನ್ (ಪ್ರವಾಹಕ್ಕೆ ವಿರುದ್ಧವಾಗಿ ಈಜಲಾಗದ ಸಣ್ಣ ಸಣ್ಣ ಸಮುದ್ರಜೀವಿಗಳು)ನ ಹರಡುವಿಕೆ ಗೋಚರಿಸಿದ್ದು, ಅವು ಕತ್ತಲಿನಲ್ಲಿ ಆಕರ್ಷಕವಾದ ನಿಯಾನ್ ನೀಲಿ ಬಣ್ಣದಲ್ಲಿ ಪ್ರಕಾಶಿಸುತ್ತಿದ್ದವು. ನೋಡುಗರನ್ನು ಮೂಕವಿಸ್ಮಿತವಾಗಿಸುವ ಈ ಸಣ್ಣ ಜೀವಿಗಳ ಜೈವಿಕದೀಪ್ತಿಯು, ಅಲೆಗಳ ಮೇಲೆ ಬೆಳಕಿನ ನೃತ್ಯದಂತೆ ಕಂಡುಬರುತ್ತದೆ, ಈ ವಿದ್ಯಮಾನದ ಸುಂದರ ಛಾಯಾ ಚಿತ್ರಗಳನ್ನು ಜನರು ಯಥೇಚ್ಚವಾಗಿ ಹಂಚಿಕೊಂಡಿದ್ದಾರೆ. ಆದರೆ, ಸಮುದ್ರವನ್ನು ಹೊಳೆಯುವಂತೆ ಮಾಡುವ ಈ ‘ಬ್ಲೂಮ್ಸ್’ ಅಥವಾ ಈ ಜೀವಿಗಳ ತ್ವರಿತ ಹರಡುವಿಕೆಯು ಅಷ್ಟೇನೂ ಸಂತೋಷ ಕೊಡುವ ವಿಷಯವಲ್ಲ.
General
ಮನುಷ್ಯ ತನ್ನ ನೂರಾರು ಆಸೆಗಳನ್ನು ಪೂರೈಸಿಕೊಳ್ಳುವ ಮತ್ತು ಆಧುನಿಕ ಜೀವನಶೈಲಿಯನ್ನು ಹೊಂದುವ ಭರಾಟೆಯಲ್ಲಿ ಅರಣ್ಯಗಳು/ಕಾಡುಗಳು ನಾಶವಾಗುತ್ತಿವೆ. ಇದರಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ಇದನ್ನು ತಗ್ಗಿಸಲು ಇರುವ ಪರಿಹಾರೋಪಾಯವೆಂದರೆ ಗಿಡಗಳನ್ನು ಬೆಳೆಸಿ ಅವನತಿಗೊಳಗಾದ ಕಾಡುಗಳನ್ನು ಮರುಸ್ಥಾಪಿಸುವುದು.
(ಅ) ಶೋಲ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಶೋಲೈ) [ಚಿತ್ರ ಕೃಪೆ: ಕ. ಅ. ಸುಬ್ರಮಣಿಯನ್]; (ಬೀ) ಬ್ಲೂ-ಲೆಗ್ಗಡ್ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಸಯನೋಫೆಮೊರ) [ಚಿತ್ರ ಕೃಪೆ: ಶಂತನು ಜೋಶಿ]; (ಸೀ) ಮಿರಿಸ್ಟಿಕ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಮಿರಿಸ್ಟಿಕೇನ್ಸಿಸ್) [ಚಿತ್ರ ಕೃಪೆ: ಶಂತನು ಜೋಶಿ]
ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಪೂರ್ವ ಘಟ್ಟದ ಕ್ರಿಕೆಟ್ ಕಪ್ಪೆಯನ್ನು ಹೋಲುವ ವಿಭಿನ್ನ ಕಪ್ಪೆಯನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.
ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಸ್ಥಳೀಯ ಸಸ್ತನಿ ಪ್ರಭೇದವಾದ ಸಿಂಗಳೀಕ (ಲಯನ್-ಟೈಲ್ಡ್ ಮಕಾಕ್.) [ಚಿತ್ರ ಕೃಪೆ: ಗಣೇಶ್ ರಘುನಾಥನ್]
ಎಚ್ಚರಿಕೆ: ಈ ಲೇಖನವು, ಕೆಲವು ಓದುಗರಿಗೆ ಕಿರಿಕಿರಿಯೆನಿಸಬಹುದಾದ ಗಾಯಗೊಂಡ ಪ್ರಾಣಿಗಳ ಚಿತ್ರಗಳನ್ನು ಒಳಗೊಂಡಿದೆ.
“ನನ್ನ ಹೆಸರು ನಕುಸ, ನಾನು ಭಾರತದ ಅನಗತ್ಯ ಮಗಳು” ಎಂದು ಕೂದಲೆಳೆಯ ಅಂತರದಲ್ಲಿ ಸಾವಿನಿಂದ ತಪ್ಪಿಸಿಕೊಂಡ ಪುಟ್ಟ ಹುಡುಗಿ ಹೇಳುತ್ತಾಳೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು ಹುಟ್ಟಿನಿಂದಲೇ ಅಥವಾ ಅದಕ್ಕೂ ಮುಂಚಿನಿಂದಲೇ ನಿರ್ದಯವಾದ ಲಿಂಗತಾರತಮ್ಯವನ್ನು ಎದುರಿಸುತಿದ್ದಾರೆ. ಭಾರತದಲ್ಲಿನ ಹಲವಾರು ಸಮಾಜಗಳಲ್ಲಿ ಇನ್ನೂ ಚಾಲ್ತಿಯಲ್ಲಿರುವ ಮತ್ತು ಆಳವಾಗಿ ಬೇರೂರಿರುವ ಪುರುಷ ಪ್ರಾಧಾನ್ಯತೆಯಿಂದ, ಪ್ರತೀ ವರ್ಷ ಲಕ್ಷಾಂತರ ಹೆಣ್ಣುಮಕ್ಕಳು ಜೀವನದಿಂದ ವಂಚಿತರಾಗುತ್ತಿದ್ದಾರೆ ಮತ್ತು ಜನಿಸಿದರೂ ಸಹ ಎಲ್ಲಾ ರೀತಿಯ ಬೆಂಬಲವಿಲ್ಲದೇ ಕುಟುಂಬದ ನಿರ್ಲಕ್ಷ್ಯವನ್ನು ಅನುಭವಿಸುತ್ತಾರೆ.
ಪ್ರಸ್ತುತ ದಿನಗಳಲ್ಲಿ ಅದೃಶ್ಯವಾಗಿ ಪ್ರಾಣಕ್ಕೆ ಅಪಾಯವನ್ನೊಡ್ಡುತ್ತಿರುವ ವಾಯುಮಾಲಿನ್ಯವು ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಪ್ರಮುಖ ಜಾಗತಿಕ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮವನ್ನು ಬೀರುತ್ತಿದೆ. ವಿಶ್ವದಲ್ಲಿನ 15 ಅತ್ಯಂತ ಕಲುಷಿತ ನಗರಗಳಲ್ಲಿ ಭಾರತವೊಂದೇ 14 ನಗರಗಳನ್ನು ಹೊಂದಿದೆ. ವಾಯುಮಾಲಿನ್ಯದ ಮಟ್ಟ ಮತ್ತು ಅದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ರಾಷ್ಟ್ರವ್ಯಾಪಿ ಎಲ್ಲಾ ರಾಜ್ಯಗಳಲ್ಲಿ ಸಮಗ್ರವಾದ ಅಧ್ಯಯನವನ್ನು ಕೈಗೊಂಡು ಅದಕ್ಕೆ ಪ್ರತಿಯಾಗಿ ಸರಿಯಾದ ಪ್ರತಿಕ್ರಮಗಳನ್ನು ಕೈಗೊಳ್ಳಬೇಕಿರುವುದನ್ನು ಖಚಿತಪಡಿಸಿಕೊಳ್ಳುವ ಅವಶ್ಯಕತೆ ಇದೆ.
ಹಸಿರು ಹುಲ್ಲುಗಾವಲುಗಳ, ಹೆಚ್ಚು ಸಮೃದ್ಧವಾಗಿರುವ ಆವಾಸಸ್ಥಾನಗಳ ಹುಡುಕಾಟದಲ್ಲಿ ಪ್ರಾಣಿಪಕ್ಷಿಗಳು, ಕಡಿಮೆ ಅನುಕೂಲಕರ ವಾತಾವರಣವನ್ನು ತೊರೆದು ಹೊರಡುತ್ತವೆ. ಸೆರೆಂಗೆಟಿಯ ಮಹಾ ವಲಸೆ, ಚಳಿಗಾಲದಲ್ಲಿ ಉಷ್ಣವಲಯದ ಕಡೆಗೆ ಸಾಗುವ ಪಕ್ಷಿಗಳು ಮತ್ತು ಬೆಳೆಗಳನ್ನು ನುಂಗಿ ಸ್ವಾಹಾ ಮಾಡಲು ದಾಳಿಯಿಡುವ ಲಕ್ಷಾಂತರ ಮಿಡತೆಗಳ ಹಿಂಡು - ಇವೆಲ್ಲಾ ಅಂತಹ ಚಲನೆಗೆ ಕೆಲವು ಉದಾಹರಣೆಗಳು. ಪರಿಚಿತ ಸ್ಥಳಗಳಿಗೆ ವಲಸೆ ಹೋಗುವುದು ಸುಲಭ; ಆದರೆ, ಅಪರಿಚಿತ ಪ್ರದೇಶಗಳಿಗೆ ದಾಂಗುಡಿ ಇಟ್ಟು, ನೆಲೆಗೊಳ್ಳುವುದು ಸವಾಲೇ ಸರಿ. ವಿಕಾಸದ ಹಾದಿಯಲ್ಲಿ, ಪ್ರಾಣಿಪಕ್ಷಿಕೀಟಗಳ ನಡವಳಿಕೆ ಮತ್ತು ಬದುಕುಳಿಯುವ ಸಾಧ್ಯತೆಗಳು, ಇಂತಹ ಸವಾಲುಗಳೊಂದಿಗೆ ಜೂಜುವುದರ ಮೂಲಕವೇ ರೂಪುಗೊಳ್ಳುತ್ತದೆ. ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ ಮತ್ತು ಸಾಸ್ತ್ರಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಹೊಸ ಅಧ್ಯಯನವೊಂದರಲ್ಲಿ, ಚಿಟ್ಟೆಗಳ ವಲಸೆಯ ಪ್ರಕ್ರಿಯೆಯಲ್ಲಿ ಇಂತಹ ಯಾವ ವಹಿವಾಟು ನಡೆಯುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ.
ಮೊಟ್ಟೆಯೊಂದಿಗೆ ಜೋಡಿ ಕ್ರೆಸ್ಟೆಡ್ ಟ್ರೀಸ್ವಿಫ್ಟ್ಗಳು [ಚಿತ್ರ: ಆದಿತ್ಯ ಪಾಲ್ / ಸಿಸಿ ಬೈ-ಎಸ್‌ಎ 4.0]
ಮನುಷ್ಯರು ಹೇಗೆ ತಮ್ಮ ಮಕ್ಕಳನ್ನು ಪೋಷಿಸಿ ದೊಡ್ಡವರನ್ನಾಗಿ ಮಾಡುತ್ತಾರೊ ಹಾಗೆಯೇ ಪ್ರಾಣಿಗಳಲ್ಲೂ ಈ ಗುಣವನ್ನು ಕಾಣಬಹುದು. ಅನೇಕ ಪ್ರಭೇದಗಳಲ್ಲಿ ಮನುಷ್ಯರಂತೆಯೇ ಪ್ರಾಣಿಗಳು ತಮ್ಮ ಮರಿಗಳ ಉತ್ತಮ ಬೆಳೆವಣಿಗೆಗೆ ಮತ್ತು ಸುರಕ್ಷೆತೆಗೆ ಅಗತ್ಯವಾದ ವಿವಿಧ ಸೌಲಭ್ಯಗಳನ್ನು ಒದಗಿಸುತ್ತವೆ. ಆಹಾರ ನೀಡುವುದು, ಗೂಡು ಕಟ್ಟುವುದು, ಕಾವು ಕೂರುವುದು, ಪರಭಕ್ಷರಿಂದ ರಕ್ಷಿಸುವುದು, ಬದುಕಲು ಅಗತ್ಯವಿರುವ ಪಾಠ ಹೇಳಿಕೊಡುವುದು ಇತ್ಯಾದಿ ಪ್ರಾಣಿಗಳಲ್ಲಿ ಕಂಡುಬರುವ ಪೋಷಣೆಯ ಕೆಲವು ವಿಧಾನಗಳಾಗಿವೆ.