‘ದಿ ಲಾನ್ಸೆಟ್ ಡಯಾಬಿಟಿಸ್ ಅಂಡ್ ಎಂಡೋಕ್ರೈನಾಲಜಿ’ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನಗಳ ಸರಣಿಯಲ್ಲಿ, ಭಾರತ, ಯು.ಕೆ ಮತ್ತು ಆಸ್ಟ್ರೇಲಿಯಾದ ಸಂಶೋಧಕರ ತಂಡವು ಸಾಂಕ್ರಾಮಿಕವೆಂಬಂತೆ ಹೆಚ್ಚುತ್ತಿರುವ ಟೈಪ್ 2 ಮಧುಮೇಹದ ಬಗ್ಗೆ, ಅದರ ಪ್ರಚಲಿತ ಚಿಕಿತ್ಸೆಯ ಬಗ್ಗೆ, ಜೊತೆಗೆ ಬಾಂಗ್ಲಾದೇಶ, ಭೂತಾನ್, ಭಾರತ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಈ ನಿಟ್ಟಿನಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅಪ್ ಟು ಡೇಟ್ ಮಾಹಿತಿ ನೀಡುತ್ತದೆ.
Deep-dive
ಯುನೈಟೆಡ್ ಕಿಂಗ್ಡಮ್ನ ಪ್ಲೈಮೌತ್ ವಿಶ್ವವಿದ್ಯಾಲಯ, ಅಮೇರಿಕಾದ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ, ಲಂಡನ್ ನ ಇಂಪೀರಿಯಲ್ ಕಾಲೇಜ್ ಮತ್ತು ಭಾರತದ ಟಾಟಾ ಸಮಾಜ ವಿಜ್ಞಾನ ಸಂಸ್ಥೆಯ ಸಂಶೋಧಕರು ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ, ಪಶ್ಚಿಮ ಘಟ್ಟಗಳ ಉತ್ತರ ಭಾಗದಲ್ಲಿನ ಬಂಡೆಗಳಿಂದಾವೃತವಾದ ಪ್ರಸ್ಥಭೂಮಿಗಳಲ್ಲಿ ‘ಬ್ಯಾಟ್ರಾಕೊಖೈಟ್ರಿಯಮ್ ಡೆಂಡ್ರೊಬಾಟಿಡಿಸ್’ನ ಪ್ರಭುತ್ವವನ್ನು ಶೋಧಿಸಿದ್ದಾರೆ.
ಕರ್ನಾಟಕದ ದಕ್ಷಿಣದಲ್ಲಿರುವ, ಐತಿಹಾಸಿಕವಾಗಿ ಬಂಟ್ವಾಳ ನದಿ ಎಂದು ಕರೆಯಲ್ಪಡುವ ನೇತ್ರಾವತಿ ನದಿಯ ಪ್ರವಾಹವು, ನೈರುತ್ಯ ಮಾನ್ಸೂನ್ ಸಮಯದಲ್ಲಿ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ. ಬಂಟ್ವಾಳ ಪಟ್ಟಣದ ಸ್ಥಳೀಯ ನಿವಾಸಿಗಳು ಇನ್ನೂ 1974 ರಲ್ಲಿ ನದಿಯ ನೀರಿನ ಪ್ರಮಾಣ ಜಾಸ್ತಿಯಾಗಿ ಅದು ಉಕ್ಕಿ ಹರಿದಾಗ ಉಂಟಾದ ವಿನಾಶಕಾರಿ ಪ್ರವಾಹದಿಂದ ಹೊರಬಂದು ಪುನಃ ಬದುಕು ಕಟ್ಟಿಕೊಳ್ಳುತ್ತಿರುವಾಗಲೇ ಮತ್ತೆ ಇದು ಇತ್ತೀಚೆಗೆ 2013 ಮತ್ತು 2015 ರಲ್ಲಿ ಹಾಗೂ 2018 ರಲ್ಲಿ ಪುನರಪ್ಪಳಿಸಿದೆ. ನದಿಯ ನೀರಿನ ಮಟ್ಟದಲ್ಲಿ ಉಂಟಾಗುತ್ತಿರುವ ಎಲ್ಲಾ ಬದಲಾವಣೆಗಳಿಗೆ ಮಳೆ ಸುರಿತದ ಏರಿಳಿತಗಳು ಕಾರಣವೇ?
ಬೆಂಗಳೂರಿನ ಅಶೋಕ ಟ್ರಸ್ಟ್ನ ಡಾ. ರವಿಕಾಂತ್ ಮತ್ತು ಅವರ ಸಹೋದ್ಯೋಗಿಗಳು ನಾರ್ವೆಯ ಓಸ್ಲೋ ವಿಶ್ವವಿದ್ಯಾಲಯದ ಸಂಶೋಧಕರ ಸಹಯೋಗದಲ್ಲಿ ನಡೆಸಿದ ಹೊಸ ಅಧ್ಯಯನವೊಂದರಲ್ಲಿ, ಗಾರ್ಸಿನಿಯಾ ಅಥವಾ ಪುನರ್ಪುಳಿ ಹಣ್ಣುಗಳು ಮತ್ತು ಅವುಗಳಿಂದ ತಯಾರಿಸುವ ಪೂರಕ ಆಹಾರಗಳಲ್ಲಿ ಕಲಬೆರಕೆಯಿರುವ ಸಾಧ್ಯತೆಯ ಮೇಲೆ ಕೇಂದ್ರೀಕರಿಸಿದ್ದಾರೆ.
ಒಮ್ಮೆ ಕಲ್ಪಿಸಿಕೊಳ್ಳಿ. ಆ ಮೋಡ ಕವಿದ ಮುಸ್ಸಂಜೆ. ಮೇಘ ತುಂಬಿದ ಬಾನು. ಆ ಬಾನಿನಿಂದ ನಿಧಾನವಾಗಿ ಕೆಳಗಿಳಿದು ಭೂಮಿಯನ್ನು ತಾಕಿದ ಮಳೆಹನಿಗಳು. ಈ ಮಳೆಹನಿಗಳ ಸ್ಪರ್ಷದಿಂದ ಹಸಿಯಾದ ಭೂಮಿಯ ಮಣ್ಣು. ಮಣ್ಣಿನಿಂದ ಹೊರಸೂಸುವ ಆ ಭೂಮಿಯ ಸುಗಂಧ. ಎಂತಹ ಅದ್ಭುತ ಅನುಭವವಲ್ಲವೆ? ಈ ಹೊಸ-ಮಳೆಹನಿಯ ಹಸಿಯಾದ ಭೂಮಿಯ ಸುವಾಸನೆ ನಿಮಗೆ ಎಂದಾದರೂ ಅದನ್ನು ತಿನ್ನಬೇಕೆನ್ನುವ ಪ್ರಚೋದನೆಯನ್ನು ನೀಡಿದೆಯೆ? ಗಾಬರಿ ಪಡಬೇಡಿ, ಅನೇಕ ಸಸ್ತನಿಗಳಲ್ಲಿ ಇದು ಸಾಮಾನ್ಯ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಶ್ರೀಕಾಂತ್ ದೇವಧರ್ ಮತ್ತು ಕವಿತಾ ಈಶ್ವರನ್ ರವರು, ಅತ್ಯಂತ ಆಕರ್ಷಕವಾದ ಪುರುಷ ಅಗಾಮಗಳು (ಹಲ್ಲಿಗಳು) ಪ್ರದರ್ಶಿಸುವ ವಿವಿಧ ವರ್ತನೆಯ ಸಂಕೇತಗಳ ಅರ್ಥವನ್ನು ಡಿಕೋಡ್ ಮಾಡಲು ತಮ್ಮ ಹೊಸ ಅಧ್ಯಯನದಲ್ಲಿ ಪ್ರಯತ್ನಿಸಿದ್ದಾರೆ.
ಇತ್ತೀಚೆಗೆ ಭಾರತದೊಳಗೆ ಆಲಿವ್ ರಿಡ್ಲೆ ಆಮೆಗಳ ಮರುಪ್ರವೇಶವು, ವಲಸೆ ಬಂದ ಪ್ರಾಣಿಗಳಿಗೆ ಭಾರತೀಯ ಕರಾವಳಿಗಳು ಅಚ್ಚುಮೆಚ್ಚಿನ ತಾಣ ಎಂಬುದನ್ನು ತೋರಿಸಿಕೊಟ್ಟಿದೆ. ಭಾರತದ ೭೫೦೦ ಕಿಲೋಮೀಟರ್ ಉದ್ದದ ಅತಿದೊಡ್ಡ ಕರಾವಳಿಯು, ವಿವಿಧ ಸಸ್ಯ ಮತ್ತು ಪ್ರಾಣಿಗಳ ನೆಲೆಯಾಗಿದೆ; ದೇಶದ ಒಟ್ಟು ಜನಸಂಖ್ಯೆಯ ಸುಮಾರು ೪೦% ಜನರು, ಇದೇ ಕರಾವಳಿಯುದ್ದಕ್ಕೂ ವಾಸಿಸುತ್ತಿದ್ದಾರೆ. ಕರಾವಳಿಯುದ್ದಕ್ಕೂ ನಡೆಯುವ ಅಭಿವೃದ್ಧಿ ಚಟುವಟಿಕೆಗಳು, ಕರಾವಳಿಯ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ.
ಹೊಸ ವರ್ಷ ಬಂದಾಯಿತು, ಆದರೆ ನಾವಿನ್ನು ೨೦೧೮ರ ವರ್ಷಾಗಮನವನ್ನು ಕಳೆದ ವರ್ಷದಲ್ಲಿ ಪ್ರಾರಂಭಿಸಿದ ಕೆಲವು ಚಟುವಟಿಗೆಗಳನ್ನು ಮೆಲಕು ಹಾಕುತ್ತಿದ್ದೇವೆ. ಅವುಗಳಲ್ಲಿ ಪ್ರಮುಖವಾದುದ್ದು ಪ್ರಾದೇಶಿಕ ಭಾಷೆಗಳಲ್ಲಿ ವೈಜ್ಞಾನಿಕ ಲೇಖನಗಳನ್ನು ಹೊರತರುವುದು. ಪ್ರಾರಂಭಿಕವಾಗಿ ನಾವು ಮೊದಲು ಕನ್ನಡದಲ್ಲಿ ಲೇಖನಗಳನ್ನು ಈಗ ಕಳೆದು ಮೂರು-ನಾಲ್ಕು ವರ್ಷಗಳಿಂದ ಬರೆಯುತ್ತಿದ್ದೇವೆ. ಇದಕ್ಕೆ ನಮಗೆ 'ಪ್ರಜಾವಾಣಿ'ಯಿಂದಲೂ ಬಹಳಷ್ಟು ಪ್ರೋತ್ಸಾಹ ದೊರೆಯಿತು. ಪ್ರತಿ ಸೋಮವಾರ, 'ವಿಜ್ಞಾನ ಲೋಕದಿಂದ' ಎಂಬ ಅಂಕಣದಲ್ಲಿ ನಮ್ಮ ಲೇಖನಗಳು ಮುದ್ರಣವಾಗುತ್ತಿತ್ತು. ಕಳೆದ ವರ್ಷ ನಾವು ಹಿಂದಿ, ಮರಾಠಿ ಮತ್ತು ಅಸ್ಸಾಮೀಸ್ ನಲ್ಲೂ ಲೇಖನಗಳನ್ನು ಪ್ರಕಟಿಸಲು ಪ್ರಾರಂಭಿಸಿದೆವು. ಈ ವರ್ಷ ಇನ್ನಷ್ಟು ಪ್ರಾದೇಶಿಕ ಭಾಷೆಗಳಲ್ಲಿ ಬಹಳಷ್ಟು ಲೇಖನಗಳು, ಪಾಡ್ಕ್ಯಾಸ್ಟ್ಗಳು, ಮತ್ತು ಇತರೆ ರೀತಿಯಲ್ಲಿ ಪ್ರಕಟಿಸಬೇಕೆಂದಿದ್ದೇವೆ. ಇಲ್ಲಿ ಕಳೆದ ವರ್ಷ ಪ್ರಾದೇಶಿಕ ಭಾಷೆಯಲ್ಲಿ ಪ್ರಕಟಿಸಿದ ಕೆಲವು ಆಯ್ದ ಲೇಖನಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇವೆ.
ಒಂದು ಕಾಲದಲ್ಲಿ ಶ್ವೇತವರ್ಣದ ಹಿಮವರ್ಷಗಳಿಂದ ಕಂಗೊಳಿಸುತ್ತಿದ್ದ, ಚಳಿಗಾಲದಲ್ಲಿ ತನ್ನದೆ ಆದ ವೈಶಿಷ್ಟ್ಯತೆಗಳಿಂದ ವಿಶ್ವದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಶಿಮ್ಲಾದ ಪ್ರಖ್ಯಾತ ಪಟ್ಟಣ ಇಂದು ಇತಿಹಾಸದಲ್ಲೇ ಕಂಡು ಕೇಳರಿಯದ ನೀರಿನ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ೨೦೧೫-೧೬ ಅವಧಿಯಲ್ಲಿ ಆವರಿಸಿದ ಬರಗಾಲವು ಮರಾಠಾವಾಡಾದ ರೈತರ ಜೀವನವನ್ನು ಸಂಪೂರ್ಣವಾಗಿ ದಿಕ್ಕೆಟ್ಟಿಸಿತ್ತು. ಇಂತಹ ಅನೇಕ ಸಂದರ್ಭಗಳು, ಸನ್ನಿವೇಶಗಳು, ಭಾರತದಲ್ಲಿ ನದಿಗಳ ಮಹತ್ವ ಏನೆಂಬುದನ್ನು ತೋರಿಸಿಕೊಟ್ಟಿವೆ. ನದಿಗಳು ನಮ್ಮ ದೇಶದೊಂದಿಗೆ ಕೇವಲ ನೈಸರ್ಗಿಕವಾದ ಸಂಬಂಧವನ್ನು ಹೊಂದಿಲ್ಲ; ನಾಡಿನ ಜನರ ನಾಡಿಮಿಡಿತದೊಂದಿಗೆ ಭಾವನಾತ್ಮಕವಾದ ಸಂಬಂಧವನ್ನೂ ಹೊಂದಿವೆ.
ಮನೆಮನೆಗಳಲ್ಲಿ ಮುದ್ದು ನಾಯಿಮರಿಗಳನ್ನು ಸಾಕುವುದು ಇಂದು ನಿನ್ನೆಯಿಂದ ಪ್ರಾರಂಭವಾದದ್ದಲ್ಲ; ಮಾನವ, ಅಲೆಮಾರಿ ಜೀವನಕ್ಕೆ ಬೆನ್ನುಮಾಡಿ, ಒಂದೆಡೆ ವಾಸ್ತವ್ಯ ಹೂಡುವುದನ್ನು ಕಲಿಯುವುದಕ್ಕೆ ಮುನ್ನವೂ, ಅವನೊಂದಿಗೆ ಹೋದಲ್ಲೆಲ್ಲಾ ಹಿಂಬಾಲಿಸಿಕೊಂಡು ಹೋಗುತ್ತಿದ್ದು, ವಾಸ್ತವ್ಯ ಹೂಡುತ್ತಿದ್ದಂತೆ ತಾನೂ ಅಲ್ಲೇ ಮೊಕ್ಕಾಂ ಹೂಡಿದ ಮೊದಲ ಪ್ರಾಣಿಗಳಲ್ಲಿ ನಾಯಿಯೂ ಒಂದು! ಆದರೆ, ಸಾಕುಪ್ರಾಣಿಯಾಗಿರಬೇಕಾದ ನಾಯಿಗಳು ಹಲವಾರು ಕಾರಣಗಳಿಂದ ಬೀದಿಯ ಪಾಲಾಗುತ್ತಿರುವುದು ವಿಪರ್ಯಾಸ ಹಾಗೂ ಹಲವು ಸಮಸ್ಯೆಗಳ ಮೂಲವೂ ಹೌದು.