ಒಂದು ಅದ್ಭುತವಾದ ವರ್ಷದ ಅಂತ್ಯದಲ್ಲಿದ್ದೇವೆ ನಾವು! ೨೦೨೧ ವರ್ಷದಲ್ಲಿ ಸಂಶೋಧನೆ ವಿಷಯದಲ್ಲಿ ಭಾರತದಲ್ಲಿ ನಡೆದ ಘಟನೆಗಳನ್ನು ಮೆಲುಕುಹಾಕುವ ಬನ್ನಿ! ೨೦೨೧ ನೇ ಇಸವಿ ಬಹಳಷ್ಟು ಜನರಿಗೆ ಏರುಪೇರಾಗಿತ್ತು. ಕೋವಿಡ್ -೧೯ ಹರಡುವಿಕೆಯ ಅಲೆ ಶಿಖರದಲ್ಲಿದ್ದರೂ ೨೦೨೦ರಲ್ಲಿ ಕಂಡುಹಿಡಿದ ಲಸಿಕೆಯನ್ನು ಭಾರತದಲ್ಲಿ ೨೦೨೧ ರಲ್ಲಿ ಪರಿಚಯಿಸಿದ್ದು ಒಂದು ಸಾಧನೆ. ಹೀಗೆ ವಿಜ್ಞಾನ, ಇಂಜಿನಿಯರಿಂಗ್, ಗಣಿತ, ಔಷಧಿ ಇನ್ನೂ ಇತರೆ ವಿಷಯಗಳಲ್ಲಿ ಸಂಶೋಧನೆ ಎಲ್ಲೆಮೀರಿದೆ. ನಾವು ಸಂಶೋಧನೆಯ ಹಾದಿಯಲ್ಲಿ ಮಾಡಿದ ಸಾಧನೆಗಳನ್ನು, ಮತ್ತು ಖ್ಯಾತಿಗಳನ್ನು ಒಮ್ಮೆ ಮೆಲುಕು ಹಾಕುವ ಸಮಯ ಇದು!
ಭಾರತದ ಹಕ್ಕಿಗಳ ವೈವಿಧ್ಯ ತೀವ್ರ ಗತಿಯಿಂದ ಕ್ಷೀಣಿಸುತ್ತಿದೆ. ಅವನ್ನು ಉಳಿಸಲು, ತುರ್ತು ಸಂರಕ್ಷಣಾ ಕ್ರಮಗಳು ಅಗತ್ಯ ಎನ್ನುತ್ತದೆ ಇತ್ತೀಚೆಗೆ ಪ್ರಕಟವಾದ ಭಾರತೀಯ ಹಕ್ಕಿಗಳ ಸ್ಥಿತಿಗತಿಯ ಕುರಿತ ಒಂದು ಸಂಶೋಧನಾ ವರದಿ.
ಬೆಂಗಳೂರು /