A new study finds that using humour to communicate about topics like AI increases a scientist's likeability and credibility.

General

ಬೆಂಗಳೂರು

2014ರಲ್ಲಿ, ಡಾ. ಸಾಹಿಲ್ ನಿಝಾವಾನ್ ನೇತೃತ್ವದ ಸ್ಥಳೀಯ ಇಡು-ಮಿಷ್ಮಿ ಜನಾಂಗದ ಒಂದು ಸಂಶೋಧನಾ ತಂಡ ಮಧ್ಯಮ ಹಾಗೂ ದೊಡ್ಡ ಗಾತ್ರದ ಸಸ್ತನಿಗಳ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ, ಈಶಾನ್ಯ ಭಾರತದ ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆಯ ಕಾಡುಗಳಲ್ಲಿ ಕ್ಯಾಮೆರಾಗಳನ್ನು ಇರಿಸಿದ್ದರು. ೨೦ ತಿಂಗಳುಗಳ ನಂತರ, ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದ ವಿಚಿತ್ರ ಹಾಗೂ ಅನಿರೀಕ್ಷಿತ ದೃಶ್ಯಗಳನ್ನು ಕಂಡು ನಿಬ್ಬೆರಗಾದರು. ಒಂದೇ ಪ್ರಭೇದದ ಆರು ಪ್ರತ್ಯೇಕ ಬಣ್ಣ ವಿಧಗಳ, ಮಧ್ಯಮ ಗಾತ್ರದ ಏಷ್ಯಾದ ಕಾಡು ಬೆಕ್ಕುಗಳು ಈ ಕಣಿವೆಯಲ್ಲಿ ಇರುವುದು ಈ ಕ್ಯಾಮೆರಾಗಳ ಮುಖೇನ ತಿಳಿದು ಬಂದಿದೆ.

ಬೆಂಗಳೂರು

 

ನೈಸರ್ಗಿಕ ವಿಕೋಪಗಳ ಪೈಕಿ ಭೂಕಂಪನವು ಅತಿ ವಿನಾಶಕಾರಿ ಮತ್ತು ಭಯ ಹುಟ್ಟಿಸುವಂತದ್ದು. ರಿಕ್ಟರ್ ಮಾಪಕದಲ್ಲಿ 5.0 ಅಥವಾ ಅದಕ್ಕಿಂತ ಹೆಚ್ಚಿನ ಪರಿಮಾಣದ ಸರಿಸುಮಾರು 5 ಭೂಕಂಪಗಳು ಪ್ರತಿದಿನ ಭೂಮಿಯ ಮೇಲೆ ಸಂಭವಿಸುತ್ತಲೇ ಇರುತ್ತವೆ. ಸ್ವತಃ ಭೂಕಂಪನಗಳೇ ವಿನಾಶಕಾರಿಯಾಗಿದ್ದು, ಇದರಿಂದ ಉಂಟಾಗಬಹುದಾದ ಸುನಾಮಿ ಅಲೆಗಳಿಂದಲೂ ತಮ್ಮ ಪ್ರಭಾವವನ್ನು ಬೀರಬಲ್ಲವಾಗಿವೆ. ಸಹಜವಾಗಿ  ಭೂಕಂಪನದ ತೀವ್ರತೆ, ಅಧಿಕೇಂದ್ರದಿಂದ ಇರುವ ದೂರ ಮತ್ತು ಆ ಪ್ರದೇಶದ ನೆಲದ ಸ್ವರೂಪ, ಹೀಗೆ ಕೆಲವು ಅಂಶಗಳು ಸಾಮಾನ್ಯವಾಗಿ ಭೂಕಂಪನದಿಂದ ಉಂಟಾಗುವ ಹಾನಿಯನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ಬೆಂಗಳೂರು

ನಾವೆಲ್ಲರೂ ಓದುವುದನ್ನು ಹೇಗೆ ಕಲಿತೆವು ಎಂದು ನೆನಪಿಸಿಕೊಂಡರೆ- ಮೊದಲಿಗೆ ನಾವು ಪ್ರತಿಯೊಂದು ಅಕ್ಷರ ಹೇಗೆ ಉಚ್ಚರಿಸುವುದು ಎಂದು ಕಲಿಯುತ್ತೇವೆ. ನಂತರ ಪೂರ್ತಿ ಪದ(ಗಳು)  ಮತ್ತು  ವಾಕ್ಯಗಳನ್ನು ಸುಲಭವಾಗಿ ಹೇಳಲು ಕಲಿಯುತ್ತೇವೆ. ಆದರೆ, ನಾವು ಓದಲು ಕಲಿಯುವಾಗ, ನಮ್ಮ ಮೆದುಳಿನಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Bengaluru

1960ರಿಂದ, ಜಗತ್ತು ತನ್ನ ಉಷ್ಣವಲಯದ ಸುಮಾರು ಅರ್ಧದಷ್ಟು ಕಾಡುಗಳನ್ನು  ತೋಟಗಾರಿಕೆ, ಮರಕಡಿತ, ಕಾಡಿನ ಬೆಂಕಿ ಮತ್ತು ರೋಗಗಳಿಗೆ ಕಳೆದುಕೊಂಡಿದೆ ಎಂದು ನಿಮಗೆ ತಿಳಿದಿದೆಯೇ? ಪ್ರಸ್ತುತ, ವರ್ಷಕ್ಕೆ ಸುಮಾರು 8 ದಶಲಕ್ಷ ಹೆಕ್ಟೇರ್ ಉಷ್ಣವಲಯದ ಕಾಡುಗಳು ಕಳೆದುಹೋಗಿವೆ. ಉಷ್ಣವಲಯದ ಕಾಡುಗಳು ಜಾಗತಿಕ ಜೀವವೈವಿಧ್ಯತೆಯ ನೆಲೆಯಾಗಿರುವುದರಿಂದ,  ಇದು ಕೇವಲ ಜೀವವೈವಿಧ್ಯತೆಯ ಮೇಲೆ  ಪರಿಣಾಮ ಬೀರುವುದಲ್ಲದೇ, ೧.೬ ಶತಕೋಟಿ ಜನರ ಜೀವನದ ಮೇಲೆಯೂ ಪರಿಣಾಮ ಬೀರುತ್ತದೆ. ಆದರೂ, ಮಾನವ ಪ್ರಾಬಲ್ಯದ ಭೂದೃಶ್ಯಗಳಲ್ಲಿ, ಅವನತಿಗೀಡಾದ  ಕಾಡುಗಳ ಪುನಶ್ಚೇತನ, ಇದುವರೆಗೆ ಸಂಭವಿಸಿರುವ ನಷ್ಟಗಳನ್ನು ಹಿಮ್ಮೆಟ್ಟಿಸಲು ಮತ್ತು ಈ ಕಾಡುಗಳ ಚೇತರಿಕೆಗೆ ಸಹಾಯ ಮಾಡುತ್ತದೆ.

ಬೆಂಗಳೂರು

ಅಧಿಕ ರಕ್ತದೊತ್ತಡವು ಭಾರತದಲ್ಲಿ ಸಾಮಾನ್ಯವಾಗಿ ಕಾಣುವ ದೀರ್ಘಕಾಲದ ಕಾಯಿಲೆಗಳಲಿೢ ಒಂದು. ರಾಷ್ಟ್ರೀಯ ಆರೋಗ್ಯ ವಿವರ (ನ್ಯಾಷನಲ್ ಹೆಲ್ತ್ ಪೋರ್ಟಲ್ - ಎನ್‌.ಎಚ್‌.ಪಿ) ೨೦೧೯ ರ ಪ್ರಕಾರ, ೨೦೧೮ ರಲ್ಲಿ ಸರ್ಕಾರಿ ಚಿಕಿತ್ಸಾಲಯಗಳಿಗೆ ಭೇಟಿನೀಡಿದ ಎಲ್ಲ ರೋಗಿಗಳಲ್ಲಿ ೬.೧೯% ಜನರು ಅಧಿಕರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಸಂಖ್ಯೆ ಮಧುಮೇಹದಿಂದ ಬಳಲುತ್ತಿರುವ ಜನರಿಗಿಂತ ಹೆಚ್ಚಾಗಿದೆ (ಸುಮಾರು ೪.೭೫% ರಷ್ಟು). ಆದರೆ ಎನ್‌.ಎಚ್‌.ಪಿಯಲ್ಲಿ ಖಾಸಗಿ ಚಿಕಿತ್ಸಾಲಯಗಳಿಗೆ ಭೇಟಿ ನೀಡುವ ಜನರನ್ನು ಪರಿಗಣಿಸುವುದಿಲ್ಲ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್  ಪ್ರಕಾರ, ನಮ್ಮ ದೇಶದಲ್ಲಿ ೧೦.೧೮ %ರಷ್ಟು ಮರಣಗಳಿಗೆ ಅಧಿಕ ರಕ್ತದೊತ್ತಡ ಮುಖ್ಯ ಕಾರಣವಾಗಿದೆ.

ಬೆಂಗಳೂರು

‘ಸಗಣಿ’ ಜೀರುಂಡೆಗಳು ಆಕರ್ಷಕ ಜೀವಿಗಳು. ಇವು ಪ್ರಾಣಿಗಳ ಸಗಣಿಗಳನ್ನು ಆಹಾರವಾಗಿ ಸೇವಿಸುತ್ತವೆ ಮತ್ತು ಅದರಿಂದ ಅವುಗಳ ಎಲ್ಲಾ ಪೋಷಕಾಂಶಗಳನ್ನು ಪಡೆಯುತ್ತವೆ. ಈ ಸಣ್ಣ ಜೀರುಂಡೆಗಳು, ಸಗಣಿಯನ್ನು  ತಿನ್ನುವ ಮೂಲಕ ಮಣ್ಣಿನ ರಚನೆ ಮತ್ತು ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತವೆ. ಹಾಗಾಗಿ, ಇವು ಕೃಷಿಯಲ್ಲಿ ಅತ್ಯಗತ್ಯ ಪಾತ್ರವನ್ನು ವಹಿಸುತ್ತವೆ.   ಪ್ರಾಣಿಗಳ ಸಗಣಿಯಲ್ಲಿ ಇರುವ ಬೀಜಗಳನ್ನು ಹರಡಲು, ಬೀಜಗಳನ್ನು ಮಣ್ಣಲ್ಲಿ ಸೇರಿಸುವ ಮೂಲಕ, ಉಷ್ಣವಲಯಪ್ರದೇಶಗಳಲ್ಲಿ ಗಿಡಮರಗಳು ಬೆಳೆಯಲು ಸಹಾಯ ಮಾಡುತ್ತವೆ. ಇವು ಸರ್ವಭಕ್ಷಕಗಳಿಗಿಂತ ಸಸ್ಯಹಾರಿಗಳ ಸಗಣಿಗಳಿಗೆ ಆದ್ಯತೆ ನೀಡುತ್ತವೆ.

ಬೆಂಗಳೂರು

ಗೆದ್ದಲುಗಳು ತಮ್ಮ ಸಾಮಾಜಿಕ ಸಂಘಟನೆ, ವಾಸ್ತುಶಿಲ್ಪ ವಿನ್ಯಾಸ ಸಾಮರ್ಥ್ಯಗಳಿಗೆ ಮತ್ತು ಕುಖ್ಯಾತವಾಗಿ ಕೀಟಗಳಾಗಿ ಹೆಸರುವಾಸಿ. ಆದಾಗ್ಯೂ, ಈ ವರೆಗೆ ವರ್ಣಿಸಲಾದ ಎಲ್ಲ ಪ್ರಭೇದಗಳು ಹಾನಿ ಉಂಟು ಮಾಡುವ ವರ್ಗಕ್ಕೆ ಸೇರುವುದಿಲ್ಲ. ಒಂದು ಕಡೆ ವಿಶ್ವದ ಗೆದ್ದಲು ಪ್ರಭೇದಗಳಲ್ಲಿ ಕೇವಲ 12.5% ​​ರಷ್ಟು ಮಾತ್ರ ಅಪಾರ ಆರ್ಥಿಕ ಹಾನಿಯನ್ನುಂಟುಮಾಡುವ ಕೀಟಗಳಾದರೆ, ಮತ್ತೊಂದೆಡೆ ಇವುಗಳ ಮಣ್ಣಿನಲ್ಲಿ ವಾಸಿಸುವ ಪ್ರತಿರೂಪಗಳು, ನೈಸರ್ಗಿಕ ಜಗತ್ತಿನಲ್ಲಿ ಅತ್ಯಗತ್ಯ ಪಾತ್ರವನ್ನು ವಹಿಸುತ್ತವೆ. ಇವು ಕಠಿಣ ಸಸ್ಯನಾರುಗಳನ್ನು ಕೊಳೆಸಲು ಅಥವಾ ಭಾಗಗಳಾಗಿ ವಿಭಜಿಸಲು ಸಹಾಯ ಮಾಡುತ್ತವೆ ಮತ್ತು ಪೋಷಕಾಂಶಗಳನ್ನು ಮಣ್ಣಿನಲ್ಲಿ ಮರುಬಳಕೆ ಮಾಡುತ್ತವೆ.

ಬೆಂಗಳೂರು

ನಾವೆಲ್ಲರೂ ಸಿಂಧೂ ನಾಗರಿಕತೆಯ ಬಗ್ಗೆ ಕೇಳಿದ್ದೇವೆ. ಸುಮಾರು ಕ್ರಿಸ್ತ ಪೂರ್ವ ಮೂರನೇ ಸಹಸ್ರಮಾನದ ಅವಧಿಯಲ್ಲಿ ಈ ಪುರಾತನ ಕಂಚಿನ ಯುಗದ ನಾಗರಿಕತೆಯು, ವಾಯುವ್ಯ ಏಷ್ಯಾದಲ್ಲಿ ಅಭಿವೃದ್ಧಿ ಹೊಂದಿತು. ಈ ನಾಗರಿಕತೆಯು ಉತ್ತಮವಾದ ಹಗೇವು (ಧಾನ್ಯಾಗಾರ)ಗಳು, ಒಳಚರಂಡಿ ವ್ಯವಸ್ಥೆ ಮತ್ತು ವ್ಯವಸ್ಥಿತವಾಗಿ ನಿರ್ಮಿಸಲಾಗಿದ್ದ ನಗರಗಳಾದ ಹರಪ್ಪಾ ಮತ್ತು ಮೊಹೆಂಜೊದಾರೊಗಳಿಗೆ ಪ್ರಸಿದ್ಧವಾಗಿದೆ. ಇದರ ಅಭಿವೃದ್ಧಿ ಮತ್ತು ಅವನತಿಗಳ ಬಗ್ಗೆ ವಿಸ್ತಾರವಾಗಿ ಗೊತ್ತಿಲ್ಲದಿದ್ದರೂ, ಇದರ ಕುರಿತಾದ ಅನೇಕ ಸಿದ್ಧಾಂತಗಳಿವೆ. ಈ ಕಾರಣಕ್ಕಾಗಿ ಇತಿಹಾಸಕಾರರು ಒಂದು ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ಬೆಂಗಳೂರು

ನಗರಗಳಲ್ಲಿ ಬದುಕುಳಿಯಲು, ನಗರವಾಸಿ ಹಲ್ಲಿಗಳು ತಮ್ಮ ಹಳ್ಳಿವಾಸಿ ಸಹೋದರರಿಗಿಂತ ಹೆಚ್ಚು ಬುದ್ಧಿವಂತಿಕೆ ಪ್ರದರ್ಶಿಸುವತ್ತ ಸಫಲವಾಗಿವೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಒಂದು ಸಂಶೋಧನಾ ತಂಡದ  ಸಂಶೋಧನಾ ಫಲಿತಾಂಶವು ಸೂಚಿಸುತ್ತದೆ. 

Search Research Matters