'ಕೀಟ ವಲಸೆ' ಎಂಬ ಪದವು ಬಣ್ಣಬಣ್ಣದ ಚಿಟ್ಟೆಗಳ ಪ್ರಸಿದ್ಧವಾದ ವಲಸೆಯನ್ನು ನೆನಪಿಸುತ್ತದೆ; ಸಾವಿರಾರು ಮೊನಾರ್ಕ್ ಚಿಟ್ಟೆಗಳು ಮೆಕ್ಸಿಕೊದಿಂದ ದಕ್ಷಿಣ ಕೆನಡಾಕ್ಕೆ ತೆರಳುವ ಅಮೋಘ ವಲಸೆಯು ಜಗತ್ಪ್ರಸಿದ್ಧ. ಇಂತಹದ್ದೇ ಒಂದು ಕೀಟ ವಲಸೆ, ಆದರೆ ಚಿಟ್ಟೆಗಳಷ್ಟು ವರ್ಣಮಯವಲ್ಲದ್ದು, ಹಿಂದೂ ಮಹಾಸಾಗರದ ಉದ್ದಗಲಕ್ಕೂ ನಡೆಯುವುದು ಕಂಡುಬಂದಿದೆ. ಡ್ರಾಗನ್ ಫ್ಲೈ ಅಥವಾ ಕೊಡತಿ ಕೀಟಗಳ ಈ ವಲಸೆಯು ಅದ್ಭುತವಾಗಿದ್ದು, ದಾಖಲಾದ ಅತೀ ಹೆಚ್ಚು ದೂರದ ಕೀಟವಲಸೆ ಎಂದು ನಂಬಲಾಗಿದೆ.
ಭಾರತದ ಹಕ್ಕಿಗಳ ವೈವಿಧ್ಯ ತೀವ್ರ ಗತಿಯಿಂದ ಕ್ಷೀಣಿಸುತ್ತಿದೆ. ಅವನ್ನು ಉಳಿಸಲು, ತುರ್ತು ಸಂರಕ್ಷಣಾ ಕ್ರಮಗಳು ಅಗತ್ಯ ಎನ್ನುತ್ತದೆ ಇತ್ತೀಚೆಗೆ ಪ್ರಕಟವಾದ ಭಾರತೀಯ ಹಕ್ಕಿಗಳ ಸ್ಥಿತಿಗತಿಯ ಕುರಿತ ಒಂದು ಸಂಶೋಧನಾ ವರದಿ.
ಬೆಂಗಳೂರು /